ಉಡುಪಿ: ಶಾಲಾ ವಾಹನಕ್ಕೆ ಇಕೋ ಕಾರು ಢಿಕ್ಕಿ

ಉಡುಪಿ: ಶಿರ್ವ ಠಾಣಾ ವ್ಯಾಪ್ತಿಯ ಕುಂಟಲ್ ನಗರ ಸಮೀಪ ಶಾಲಾ ವಾಹನಕ್ಕೆ ಇಕೋ ಕಾರು ಡಿಕ್ಕಿ ಹೊಡೆದಿದೆ.
ಶಾಲಾ ಮಕ್ಕಳ ವಾಹನ ಮಣಿಪುರ ಕಡೆಗೆ ಬರುವ ಸಂದರ್ಭ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ತಂದೆ ಮಗನಿಗೆ ಗಾಯಗಳಾಗಿವೆ. ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ವಾಹನಗಳನ್ನು ತೆರವುಗೊಳಿಸಿದರು.