ಬಲೂನ್ ಊದುತ್ತಿದ್ದಾಗ ಗಂಟಲಲ್ಲಿ ಸಿಲುಕಿ 8 ವರ್ಷದ ಬಾಲಕಿ ಸಾವು
ಮುಂಬೈ: ಗಂಟಲಲ್ಲಿ ಬಲೂನ್ ಸಿಲುಕಿ 8 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಧುಲೆ ನಗರದ ಯಶವಂತ್ ನಗರದಲ್ಲಿ ನಡೆದಿದೆ.
ಡಿಂಪಲ್ (8) ಸಾವನ್ನಪ್ಪಿದ ಬಾಲಕಿ. ಈಕೆ ತನ್ನ ಇತರ ಸ್ನೇಹಿತರೊಂದಿಗೆ ಅಂಗಳದಲ್ಲಿ ಬಲೂನ್ ಜೊತೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಾಯಿಯಲ್ಲಿ ಬಲೂನ್ ಊದುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬಲೂನ್ ಬಾಯಿಯಲ್ಲಿ ಬ್ಲಾಸ್ಟ್ ಆಗಿ ಅದರ ತುಂಡುಗಳು ಬಾಲಕಿಯ ಗಂಟಲಲ್ಲಿ ಸಿಲುಕಿಕೊಂಡಿತ್ತು. ಕೂಡಲೇ ಆಕೆ ಮೂರ್ಛ ಹೋದಳು. ಆಕೆ ಬಿದ್ದದ್ದನ್ನು ನೋಡಿದ ಇತರ ಸ್ನೇಹಿತರು ಬಾಲಕಿಯ ಕುಟುಂಬದವರಿಗೆ ವಿಷಯ ತಿಳಿಸಿದರು.




