February 2, 2026

ನಡು ರಸ್ತೆಯಲ್ಲಿಯೇ ಹೊತ್ತಿ‌ ಉರಿದ ಕಾರು: ಪ್ರಯಾಣಿಕರು ಪಾರು

0
n342957298163997918752725bf278ffc0de5516bb4de0fde837561e3d2e33958d0590a907069c3bd8342b8.jpg

ಬಳ್ಳಾರಿ: ನಡು ರಸ್ತೆಯಲ್ಲಿಯೇ ಸ್ಕಾರ್ಪಿಯೋ ಕಾರೊಂದು ಹೊತ್ತಿ ಉರಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ನಗರದ ಮೋತಿ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಸ್ಕಾರ್ಪಿಯೋ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಆಂಧ್ರ ಪ್ರದೇಶದ ಗುಂತಕಲ್ ನಿಂದ ಹೊಸಪೇಟೆಗೆ ಮದುವೆಗೆ ಬಂದಿದ್ದು, ಮದುವೆ ಮುಗಿಸಿಕೊಂಡು ಗುಂತಕಲ್ಗೆ ತೆರಳುತ್ತಿರುವಾಗ ಕಾರಿನಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡಿದೆ.

ಇನ್ನು ಕಾರಿನಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!