ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು
ಬೀದರ್: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾಗಿರುವ ದುರಂತ ಘಟನೆ ಬೀದರ್‌ನಲ್ಲಿ ಸಂಭವಿಸಿದೆ.
ಪ್ರಕಾಶ್(22), ಶಿವಾಜೀ (21) ಮತ್ತು ಆಕಾಶ್ ಕಂಟೆಪ್ಪ ಗುಂಗೆ (23) ಮೃತ ದುರ್ದೈವಿಗಳು.
ಪ್ರಕಾಶ್ ಹಾಗೂ ಶಿವಾಜೀ ಎಂಬ ಯುವಕರಿಬ್ಬರು ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಐತಿಹಾಸಿಕ ಬಾವಿಯಲ್ಲಿ ಈಜಲು ತೆರಳಿದ್ದರು. ಆಳದ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸ್ನೇಹಿತನನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ.




