ಮಂಗಳೂರು: ಅಕ್ರಮ ಪಿಸ್ತೂಲ್ ಪ್ರಕರಣ ಮತ್ತೊಬ್ಬ ಆರೋಪಿಯ ಬಂಧನ

ಮಂಗಳೂರು: ಇತ್ತೀಚೆಗೆ ಅಕ್ರಮ ಪಿಸ್ತೂಲ್ ನೊಂದಿಗೆ ಯಾವುದೋ ದುಷ್ಕೃತ್ಯಕ್ಕೆ ಹೊಂಚಹಾಕಿದ್ದ ತಂಡವನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಈ ಪ್ಪಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಂಬಾರ್ ನಿವಾಸಿ ಅಬ್ದುಲ್ ಫೈಜಲ್ ಅಲಿಯಾಸ್ ಫೈಜು (26 ವರ್ಷ) ಬಂಧಿತ ಆರೋಪಿ. ಆತನನ್ನು ಮಂಜೇಶ್ವರ ಬಳಿಯ ಮೊರ್ತಾನದಲ್ಲಿ ಶನಿವಾರ ಬಂಧಿಸಿದ್ದೇವೆ. ಆತನಿಂದ ಒಂದು ಪಿಸ್ತೂಲ್, ಒಂದು ಸಜೀವ ಗುಂಡು, ಮೊಬೈಲ್ ಸೇರಿದಂತೆ ಒಟ್ಟು ₹ 2.10 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸುದ್ದಿಗಾರರಿಗೆ ಇಲ್ಲಿ ಭಾನುವಾರ ತಿಳಿಸಿದರು.