ಕಾರ್ಕಳ: ಬ್ಯಾಂಕಿಗೆ ತೆರಳಿದ್ದ ಯುವತಿ ನಾಪತ್ತೆ

ಕಾರ್ಕಳ : ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದ ಯುವತಿ ನಾಪತ್ತೆಯಾದ ಘಟನೆ ಮಾ.7 ರಂದು ಮಿಯ್ಯಾರಿನಲ್ಲಿ ಸಂಭವಿಸಿದೆ. ಮಿಯ್ಯಾರು ಗ್ರಾಮದ ಮಂಜಿರಾಯಿ ಕಂಬಳ ಬಳಿ ನಿವಾಸಿ ಅಮೂಲ್ಯ (18) ನಾಪತ್ತೆಯಾದವರು.
ಬೆಳಿಗ್ಗೆ 11 ಗಂಟೆಗೆ ಬ್ಯಾಂಕಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟವರು ಬ್ಯಾಂಕಿಗೂ ಹೋಗದೆ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ. ಆಕೆಯ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ತಾನು ಬೆಂಗಳೂರಿಗೆ ಹೋಗಿರುವುದಾಗಿ ಹೇಳಿದ್ದು, ಬೇರೆ ಯಾವುದೇ ಮಾಹಿತಿ ತಿಳಿದಿಲ್ಲ.
ಅಮೂಲ್ಯ ಅವರ ಹೆತ್ತವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಮಾಹಿತಿ ದೊರೆತಲ್ಲಿ 08258-230213, 233100 ಅಥವಾ 9480805461 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.