ಪೊಲೀಸ್ ಠಾಣೆಯಲ್ಲೇ ಮೊಬೈಲನ್ನೇ ಎರಗಿಸಿದ ಖದೀಮ: ಕಳ್ಳತನದ ದೃಶ್ಯ ವೈರಲ್

ಗದಗ: ಪೊಲೀಸ್ ಠಾಣೆಯಲ್ಲೇ, ಪೊಲೀಸರ ಎದುರೇ ಪೊಲೀಸರ ಮೊಬೈಲನ್ನೇ ಖದೀಮ ಕಳ್ಳತನ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆದರೆ, ಪೊಲೀಸ್ ಠಾಣೆ ಅಧಿಕಾರಿಗಳ ಪ್ರಕಾರ ಇದು ಕಳ್ಳತನವಲ್ಲ. ಅಜಾಗರೂಕತೆಯಿಂದ ನಡೆದ ಘಟನೆ ಎಂದು ಹೇಳಲಾಗುತ್ತಿದೆ.
ಹೋಟೆಲ್ ಒಂದರಲ್ಲಿ ನಡೆದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಬಿಲ್ ಕೊಡದೆ ಗಲಾಟೆ ಮಾಡಿಕೊಂಡಿದ್ದ ವ್ಯಕ್ತಿಯ ಪರವಾಗಿ, ಮುಲ್ಲಾ ಅನ್ನುವ ಯುವಕ ಪೊಲೀಸ್ ಸ್ಟೇಷನ್‌ಗೆ ಬಂದಿದ್ದನು.