ಕಾಸರಗೋಡು: ಲಾರಿ-ಸ್ಕೂಟರ್ ಡಿಕ್ಕಿ: ಯುವಕ ಮೃತ್ಯು

ಕಾಸರಗೋಡು: ಎಲೆಕ್ಟ್ರಿಕ್ ಸ್ಕೂಟರ್ ಹಿಂಬದಿಯಲ್ಲಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ ಸವಾರರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಡಂಕಾರು ಉಪ್ಪಳದ ಕನ್ನಾಟಿ ಪಾರ ಹನೀಫ್ ಎಂಬವರ ಪುತ್ರ ಮುಹಮ್ಮದ್ ಅನ್ವಾಝ್ (24) ಮೃತ ದುರ್ದೈವಿ. ಅಂಗಡಿಮುಗರಿನ ಫಝಲ್ ರೆಹಮಾನ್ ಗಾಯಗೊಂಡಿದ್ದು, ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಮಂಜೇಶ್ವರ ರಫಾ ಹಾಲ್ ಬಳಿ ಅಪಘಾತ ಸಂಭವಿಸಿದೆ.