ಮೂಡುಬಿದಿರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ

ಮೂಡುಬಿದಿರೆ: ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪ್ರಾಂತ್ಯ ಗ್ರಾಮದ ಲಾಡಿ ಸಮೀಪದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪೋಕೋ ಕೇಸು ದಾಖಲಿಸಲಾಗಿದೆ.
ಆರೋಪಿಯು ತನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಲಕಿಯ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವರ್ಷದಿಂದ ಬರುತ್ತಿದ್ದು, ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುತ್ತಾನೆ ಎಂದು ಸಂತ್ರಸ್ತೆಯ ಹೆತ್ತವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.