ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ವಿಜೇತರಿಗೆ ಸನ್ಮಾನ
ಮಂಜೇಶ್ವರಂ: ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ಕಳೆದ ವರ್ಷ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪಿಟಿಎ ಸಮಿತಿಯ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ಪಿಟಿಎ ಕಾರ್ಯದರ್ಶಿ ಗಳಾದ
ಸಜಿತ್ ಕುಮಾರ್ ಪಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ
ಕಾಲೇಜಿನ ಪ್ರಾಚಾರ್ಯರಾದ ಡಾ ಮುಹಮ್ಮದ್ ಅಲಿ ರವರ ಅಧ್ಯಕ್ಷತೆಯಲ್ಲಿbಮಂಜೇಶ್ವರಂ ಶಾಸಕ ಎ.ಕೆ.ಎಂ.ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರಾದ ಡಾ ಆರ್.ಸಿಂಧು ಜೋಸೆಫ್, ಅಗ್ನಿ ಸಾಯಿ, ಶಿವ ಶಂಕರ್, ಕಾಲೇಜು ಯೂನಿಯನ್ ಅಧ್ಯಕ್ಷರಾದ ದಾವೂದ್, ಹಳೆ ವಿದ್ಯಾರ್ಥಿ ಮನಾಫ್ PTA ಸದಸ್ಯರಾದ ಆಯಿಷಾ ಉಪಸ್ಥಿತರಿದ್ದರು.




