February 2, 2026

ಬಂಟ್ವಾಳ: ತೆಂಗಿನ ಎಣ್ಣೆ ಮಿಲ್ ಅಗ್ನಿಗಾಹುತಿ

0
image_editor_output_image1799047426-1741504579248.jpg

ಬಂಟ್ವಾಳ: ತೆಂಗಿನ ಎಣ್ಣೆ ಮಿಲ್ ಅಗ್ನಿಗಾಹುತಿಯಾದ ಘಟನೆ ಬಂಟ್ವಾಳ – ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಕಾವಳಪಡೂರು ಗ್ರಾಮದ ಬಾಂಬಿಲ ನಿವಾಸಿ ಜಯರಾಮ ಗೌಡ ಎಂಬವರ ಮಾಲಕತ್ವದ ‘ಐ ಗ್ರೋ ಇನ್ ಕಾರ್ಪ್’ ಎಂಬವರಿಗೆ ಸೇರಿದ್ದ ಮಿಲ್ ಇದಾಗಿದ್ದು, ಶನಿವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಮಿಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಮಿಲ್ ಸಮೀಪವೇ ಜಯರಾಮ ಅವರ ಮನೆಯಿದ್ದು, ಬೆಂಕಿ ಅವಘಡ ತಕ್ಷಣ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಥಳೀಯರನ್ನು ಹಾಗೂ ಅಗ್ನಿಶಾಮಕ ದಳವನ್ನು ಕರೆಸಿದ್ದರು. ಬಂಟ್ವಾಳ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!