March 5, 2026

ವಿಟ್ಲ: ಕೆಪಿಟಿಸಿಎಲ್ ಕೇಂದ್ರದ ಬಳಿ ಬೆಂಕಿ ಅವಘಡ: ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

0
IMG-20250308-WA0003.jpg

ವಿಟ್ಲ: ವಿಟ್ಲದ ಕೆಪಿಟಿಸಿಎಲ್ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ ತಗುಲಿದ ಘಟನೆ ನಡೆದಿದೆ.

ವಿಟ್ಲದ ಹಳೆಯ ಮೆಸ್ಕಾಂ ಕಚೇರಿ ಹಾಗೂ ಕೆಪಿಟಿಸಿಎಲ್ ಕಚೇರಿಗೆ ತಾಗಿಕೊಂಡಿರುವ ಜಾಗಕ್ಕೆ ವಿದ್ಯುತ್ ಕಂಬದಿಂದ ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದರ ಸುತ್ತಮುತ್ತಲಿನಲ್ಲಿ ಹಲವು ಮನೆಗಳಿದ್ದು, ಆತಂಕ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬಳಿಕ ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಫ್, ಸ್ಥಳೀಯರಾದ ವಿಕೆಎಂ ಹಂಝ, ಹನೀಫ್ ರೆಡ್ ಟ್ಯಾಗ್, ಮೊಹಮ್ಮದ್ ಗಮಿ ಅವರು ಪುತ್ತೂರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ವಿಟ್ಲದ ಕೆಪಿಟಿಸಿಎಲ್ ಸಿಬ್ಬಂದಿಗಳು ಕೂಡಾ ಬೆಂಕಿ ನಂದಿಸಲು ಸಹಕರಿಸಿದರು.

ಕೆಪಿಟಿಸಿಎಲ್ ಕಚೇರಿ ಸಮೀಪವೇ ಗಿಡಗಂಟಿಗಳು ತುಂಬಿದೆ. ಕಚೇರಿಯ ಮಹಡಿಗೆ ಒಣ ಗಿಡಗಳು ಆವರಿಸಿದೆ. ವಿದ್ಯುತ್ ಕಂಬಗಳಲ್ಲಿಯೂ ಗಿಡ ತುಂಬಿದೆ. ಇದರಿಂದಾಗಿ ಬೆಂಕಿ ವೇಗವಾಗಿ ಉರಿದಿದೆ. ಮೆಸ್ಕಾಂ ಅಧಿಕಾರಿಗಳ ಬೇಜಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!