ಸುಳ್ಯದ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ವಸತಿ ಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ
ಪುತ್ತೂರು: ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳು ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ತೆಲಸಂಗ ಗ್ರಾಮದ ಕೃತಿಕಾ ಸಿದ್ದಣ್ಣ ನಿಡೋಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮೃತರ ತಂದೆ ನೀಡಿದ ದೂರಿನ ಮೇರೆಗೆ ಪುತ್ತೂರಿನ ನವೀನ್ ಮತ್ತು ವಸತಿ ಗ್ರಹದ ಮೇಲ್ವಿಚಾರಕಿ ತಾರ ಕುಮಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತ ಯುವತಿಗೆ ಪುತ್ತೂರಿನ ನವೀನ್ ಎಂಬಾತ ಪದೇ ಪದೇ ಕರೆ ಮಾಡಿ ತೊಂದರೆ ನೀಡಿ ಫೋಟೋ ವಿಡಿಯೋಗಳನ್ನು ತಂದೆಗೆ ಕಳಿಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಕಿಸಲಾಗಿದೆ.




