ತೋಟದ ಮನೆಯಲ್ಲಿಯೇ ವಾಸವಾಗಿದ್ದ ವೃದ್ದ ದಂಪತಿಯ ಭೀಕರ ಕೊಲೆ

ಮೈಸೂರು: ಹಲವು ವರ್ಷದಿಂದ ತೋಟದ ಮನೆಯಲ್ಲಿಯೇ ವಾಸವಾಗಿದ್ದ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರೊಬ್ಬರ ವೃದ್ದ ದಂಪತಿಗಳನ್ನು ಸೋಮವಾರ ಭೀಕರವಾಗಿ ಕೊಲೆ ಮಾಡಲಾಗಿದೆ.
ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಇವರ ಪತ್ನಿ ಶಾಂತಮ್ಮ (52)ಮೃತಪಟ್ಟವರು.
ಸೋಮವಾರ ಸಂಜೆ ರಂಗಸಾಮಿಗೌಡರ ಪುತ್ರ ದೇವರಾಜ್ ಶುಂಠಿ ಜಮೀನಿನಲ್ಲಿ ಕೀಳುತ್ತಿದ್ದ ವೇಳೆ ಶುಂಠಿತುಂಬಲು ಕುಕ್ಕೆ ತರುವಂತೆ ಕಾರ್ಮಿಕ ಗಣೇಶನನ್ನು ತಂದೆಯ ತೋಟದ ಮನೆಗೆ ಕಳುಹಿಸಿದ ವೇಳೆ ಮನೆಯೊಳಗೆ ಶಾಂತಮ್ಮ ಹಾಗೂ ದನದ ಕೊಟ್ಟಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದ್ದು. ತಕ್ಷಣವೇ ದೇವರಾಜ್ ಗೆ ಮಾಹಿತಿ ನೀಡಿದ್ದಾರೆ. ಹಾಡು ಹಗಲೇ ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ವೃದ್ದ ದಂಪತಿ ಕೊಲೆ ಮಾಡಿರುವುದು ಗೊತ್ತಾಗಿದೆ.