February 1, 2026

ಪುತ್ತೂರು: ಬಸ್ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ: ಮಹಿಳೆ ಮತ್ತು 3 ವರ್ಷದ ಮಗು ಮೃತ್ಯು

0
image_editor_output_image1671245428-1740923727205

ಪುತ್ತೂರು: ಆಟೋ ರಿಕ್ಷಾವೊಂದು ಮುಂದಿನಿಂದ ಹೋಗುತ್ತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಲ್ಟಿಯಾಗಿ ಎದುರಿನಿಂದ ಬರುತಿದ್ದ ಕೆಎಸ್ಸಾಟರ್ಿಸಿ ಬಸ್ಸಿಗೆ ಗುದ್ದಿದ ಪರಿಣಾಮವಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಎಳೆಯ ಪ್ರಾಯದ ಬಾಲಕ ಸಹಿತ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಹಾಗೂ ಚಾಲಕ ಗಂಭೀರ ಗಾಯಗೊಂಡ ದಾರುಣ ಘಟನೆ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಗುಡ್ಡೆ ಪಡ್ಪು ನಿವಾಸಿ, ರಿಕ್ಷಾ ಚಾಲಕ ಮಹಮ್ಮದ್ ಅವರ ಎರಡನೇ ಪತ್ನಿ ಜಮೀಲಾ (51) ಮತ್ತು ಆಕೆಯ ಪುತ್ರಿಯ ಪುತ್ರ ತಬ್ಜಿರ್ (5) ಮೃತಪಟ್ಟವರು.
ಪತ್ನಿ ಹಾಗೂ ಮೊಮ್ಮಗನ ಜತೆಗೆ ಮಂಗಳೂರಿಗೆ ಬಟ್ಟೆ ಖರೀದಿಸಲು ಹೋಗಿದ್ದ ಮ ಹಮ್ಮದ್ ಅವರು ಮಂಗಳೂರಿನಿಂದ ಪುತ್ತೂರಿಗೆ ಹಿಂತಿರುಗಿ ರಿಕ್ಷಾದಲ್ಲಿ ಬರುತಿದ್ದ ವೇಳೆ ಈ ದುರ್ಘ ಟನೆ ಸಂಭವಿಸಿದೆ.

ಮಹಮ್ಮದ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತಿದ್ದ ರಿಕ್ಷಾ ಪುತ್ತೂರು ನಗರದ ಹೊರ ವಲಯದ ಮಂಜಲ್ಪಡ್ಪು ಶೆಡ್ಡೆ ಪೆಟ್ರೋಲ್ ಪಂಪ್ ಎದುರುಗಡೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಹೋಗುತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಲ್ಟಿಯಾಗಿ ಎದುರುಗಡೆಯಿಂದ ಬರುತಿದ್ದ ಬಸ್ಸಿಗೆ ಗುದ್ದಿದೆ.

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ರಿಕ್ಷಾ ಚಾಲಕ ಮಹಮ್ಮದ್ ಅವರ ಎರಡನೇ ಪತ್ನಿ ಜಮೀಲ ಮತ್ತು ಆಕೆಯ ಪುತ್ರಿಯ ಮಗ ತಬ್ಜಿರ್ ಘಟನೆಯಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ಅವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!