ಬಂಟ್ವಾಳ: ಯುವಕನ ಪತ್ತೆಗೆ ಪೊಲೀಸ್ ಇಲಾಖೆಗೆ 2 ದಿನ ಕಾಲಾವಕಾಶ: ಸಂಘಪರಿವಾರದ ಕಾರ್ಯಕರ್ತರ ಪ್ರತಿಭಟನೆ ವಾಪಸ್

ಬಂಟ್ವಾಳ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ವಿಧ್ಯಾರ್ಥಿ ದಿಗಂತ್ ಪತ್ತೆಗಾಗಿ ಸಂಘಪರಿವಾರದ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ವಿಧ್ಯಾರ್ಥಿ ಪತ್ತೆಗೆ ಪೊಲೀಸರಿಗೆ ಎರಡು ದಿನಗಳ ಗಡುವು ನೀಡಲಾಗಿದೆ.
ಫೆಬ್ರವರಿ 25 ರಿಂದ ನಾಪತ್ತೆಯಾಗಿರುವ ವಿಧ್ಯಾರ್ಥಿ ದಿಗಂತ್ ಶೀಘ್ರವಾಗಿ ಪತ್ತೆ ಮಾಡುವಂತೆ ಆಗ್ರಹಿಸಿ ಸಂಘಪರಿವಾರದ ಕಾರ್ಯಕರ್ತರು ಹಾಗೂ ಸ್ಥಳೀಯರು ಇಂದು ಫರಂಗಿಪೇಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನೆಗೆ ಆಗಮಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಪೊಲೀಸ್ ಇಲಾಖೆಗೆ ಸೋಮವಾರದ ವರೆಗೆ ಬಾಲಕನ ಪತ್ತೆಗೆ ಅವಕಾಶ ನೀಡಿದರು. ಅಲ್ಲದೆ ವಿಧ್ಯಾರ್ಥಿ ಪತ್ತೆಯಾಗದಿದ್ದರೆ ಎಲ್ಲಾ ಶಾಸಕರೊಂದಿಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವೇಳೆ ಮಾತನಾಡಿದ ಎಸ್ಪಿ ಪೊಲೀಸರು ನಿದ್ರೆ ಬಿಟ್ಟು ಬಾಲಕನ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಕರಣ ಸ್ವಲ್ಪ ಕಾಂಪ್ಲಿಕೇಟ್ ಆಗಿದ್ದು ಜನರ ಸಹಕಾರ ಅಗತ್ಯ ಎಂದರು. ಬಳಿಕ ಜನರಲ್ಲಿ ಪ್ರತಿಭಟನೆ ವಾಪಾಸ್ ಗೆ ಮನವಿ ಮಾಡಿದರು. ಸದ್ಯ ಪೊಲೀಸರಿಗೆ ಗಡುವು ನೀಡಲಾಗಿದ್ದು, ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಗಿದೆ.