December 16, 2025

3 ವರ್ಷದಲ್ಲಿ 100 ಬೈಕ್ ಕಳ್ಳತನ: ಆರೋಪಿಯ ಬಂಧನ

0
image_editor_output_image1468698566-1740772685172.jpg

ಬೆಂಗಳೂರು: 3 ವರ್ಷದಲ್ಲಿ ಬರೋಬ್ಬರಿ 100 ಬೈಕ್ ಕಳ್ಳತನ ಮಾಡಿರುವ ಖತರ್ನಾಕ್ ಖದೀಮನನ್ನ ಕೆ.ಆರ್ ಪುರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಬಂಗಾರುಪಾಳ್ಯಂ ನಿವಾಸಿ ಪ್ರಸಾದ್ ಬಾಬು ಬಂಧಿತ ಕಳ್ಳ. ದುಬಾರಿ ಬೆಲೆಯ ಬೈಕ್‌ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಪ್ರಸಾದ್ ಬಾಬು, ಪ್ರತಿ ದಿನ ಸಂಜೆ ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ. ನಂತರ ಕೆಆರ್ ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಟ ನಡೆಸಿ, ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ.

ಬಂದ ದಿನವೇ ಬೈಕ್ ಕದ್ದು, ಅದೇ ಬೈಕ್‌ನಲ್ಲಿ ಊರಿಗೆ ಎಸ್ಕೇಪ್ ಆಗುತ್ತಿದ್ದ. ಬೆಂಗಳೂರು, ತಿರುಪತಿ, ಚಿತ್ತೂರು ಸೇರಿ ಹಲವೆಡೆ ಕಳ್ಳತನ ಮಾಡುತ್ತಿದ್ದ. ಪ್ರಸಾದ್ ಬಾಬು ಕದ್ದ ಬೈಕ್‌ಗಳನ್ನ 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಆರೋಪಿಯಿಂದ 20 ರಾಯಲ್ ಎನ್‌ಫೀಲ್ಡ್ ಬೈಕ್, 30 ಫಲ್ಸರ್ ಬೈಕ್, 40 ಆಕ್ಟಿವಾ ಹಾಗೂ ಇತರೆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!