ಸಾಪ್ಟ್‌ವೇರ್ ಕಂಪೆನಿಯ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ
ತುಮಕೂರು: ಸಾಪ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರು ಕುಣಿಗಲ್ ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಣಿಗಲ್ ತಾಲೂಕು ಸೊಬಗನಹಳ್ಳಿ ಗ್ರಾಮದ ನಿವಾಸಿ ಸುಮಾ (26) ಮೃತ ಟೆಕ್ಕಿ.
ಸುಮಾ ಶಿವರಾತ್ರಿ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಗುರುವಾರ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಬಸ್ಸಿನಲ್ಲಿ ಯಾರದ್ದೋ ಜೊತೆ ಫೋನಿನಲ್ಲಿ ಮಾತನಾಡುತ್ತಾ ಜಗಳ ಮಾಡಿಕೊಂಡಿದ್ದಾರೆ. ಜಗಳ ಮಾಡುತ್ತಲೇ ಕುಣಿಗಲ್ ಬಸ್ ನಿಲ್ದಾಣದಿಂದ ದೊಡ್ಡಕೆರೆ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




