March 22, 2026

ಬಂಟ್ವಾಳ: ಡೆತ್ ನೋಟು ಬರೆದಿಟ್ಟು ಲಾಡ್ಜ್ ನಲ್ಲಿ ಉದ್ಯಮಿ ಆತ್ಮಹತ್ಯೆ

0
IMG-20211219-WA0034.jpg

ಬಂಟ್ವಾಳ: ಸಾಲದ ಬಾಧೆ ಎಂಬ ಕಾರಣಕ್ಕಾಗಿ ಡೆತ್ ನೋಟ್ ಬರೆದು ಉದ್ಯಮಿಯೋರ್ವರು ಲಾಡ್ಜ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಕನಪಾದೆ ನಿವಾಸಿ ಕೃಷ್ಣ ಟಿ. ಎನ್ನಲಾಗಿದೆ. ಬಿಸಿರೋಡಿನ ಕೃಷ್ಣ ಪ್ರೈಮ್ ಹೋಟೆಲ್ ನ ರೂಮ್ ನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಐಸ್ ಕ್ರೀಂ ಸಂಸ್ಥೆಯೊಂದರ ಮಾಲಕರಾಗಿದ್ದು, ಜೊತೆಗೆ ಕ್ಲಬ್ ಕೂಡಾ ನಡೆಸುತ್ತಿದ್ದರು ಎನ್ನಲಾಗಿದೆ.

ಉದ್ಯಮದಲ್ಲಿ ನಷ್ಟವಾಗಿದ್ದು, ಸಾಲದಬಾಧೆಯಿಂದ ಬಳಲುತ್ತಿದ್ದರು ಎಂಬ ಕಾರಣವನ್ನು ಚೀಟಿಯಲ್ಲಿ ಬರೆದು ಕಿಸೆಯಲ್ಲಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್‌ಐ ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!