ದೂರು ನೀಡಲು ಠಾಣೆಗೆ ಬಂದ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ: ಪೊಲೀಸ್ ಕಾನ್ಸ್ಟೇಬಲ್ ಬಂಧನ

ದೂರು ನೀಡಲು ಠಾಣೆಗೆ ಬಂದ ಅಪ್ರಾಪ್ತೆ ವಯಸ್ಸಿನ ಹುಡುಗಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ ಎಂದು ಬೊಮ್ಮನಹಳ್ಳಿ ಠಾಣೆಯ ಕಾನ್ ಸ್ಟೇಬಲ್ ಅರುಣ್ ವಿರುದ್ಧ ಗಂಭೀರ ಆರೋಪ ಬಂದಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು, ಕಾನ್ಸ್ಟೇಬಲ್ ಸೇರಿ ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ತಮಗಾದ ಅನ್ಯಾಯ ಬಗ್ಗೆ ಬಾಲಕಿ ಹಾಗೂ ಬಾಲಕಿ ತಾಯಿ ದೂರು ನೀಡಲು ಠಾಣೆಗೆ ಹೋಗಿದ್ದು, ಬೊಮ್ಮನಹಳ್ಳಿ ಪೋಲಿಸ್ ಠಾಣಾ ಪೇದೆ ಬಾಲಕಿಯ ನಂಬರ್ ಪಡೆದು ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ್ದಾನೆಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳಾದ ಪೇದೆ ಅರುಣ್ ಹಾಗೂ ವಿಕ್ಕಿ ಎಂಬುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.