ಸುಳ್ಯ: ಮಿತ್ತಮಜಲು ಅರಣ್ಯ ಪ್ರದೇಶಕ್ಕೆ ಬೆಂಕಿ

ಸುಳ್ಯ: ಜಾಲ್ಲೂರು ಗ್ರಾಮದ ಸೋಣಂಗೇರಿ ಸಮೀಪದ ಮಿತ್ತಮಜಲು ಅರಣ್ಯ ಪ್ರದೇಶಕ್ಕೆ ಸೋಮವಾರ ಬೆಂಕಿ ಬಿದ್ದ ಘಟನೆ ಸಂಭವಿಸಿದೆ.
ಮುಖ್ಯ ರಸ್ತೆಯ ಸಮೀಪ ಬೆಂಕಿಯನ್ನು ಗಮನಿಸಿದ ಸ್ಥಳೀಯರು ಸುಳ್ಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಧಾವಿಸಿ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ದುಗ್ಗಲಡ್ಕದ ದುಗ್ಗಲಾಯ ಯುವಸೇವಾ ಸಂಘದ ಸದಸ್ಯರಾದ ಶಿವಕುಮಾರ್ ಈಶ್ವರಡ್ಕ, ನಾರಾಯಣ ನಾಯ್ಕ, ಗಿರೀಶ್ ಕೊಡೆಂಚಡ್ಕ, ಆನಂದ ಅವರು ಕಾರ್ಯಾಚರಣೆಗೆ ಸಹಕರಿಸಿದರು