March 20, 2026

ಕಕ್ಕಿಂಜೆಯಲ್ಲಿ ಎಸ್‌ಡಿಪಿಐ ಚಾರ್ಮಾಡಿ ಗ್ರಾಮ ಸಮಿತಿಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ

0
IMG-20250223-WA0010.jpg

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಾರ್ಮಾಡಿ ಗ್ರಾಮ ಸಮಿತಿಯ ನೂತನ ಪಕ್ಷದ ಕಚೇರಿ ಉದ್ಘಾಟನೆ ಸಾರ್ವಜನಿಕ ಸಭೆ ಕಾರ್ಯಕ್ರಮ ರಹೀಮ್ ಬೀಟಿಗೆ ಅಧ್ಯಕ್ಷತೆಯಲ್ಲಿ ಕಕ್ಕಿಂಜೆಯಲ್ಲಿ ಭಾನುವಾರ ನಡೆಯಿತು.

ನೂತನ ಪಕ್ಷದ ಕಚೇರಿ ಉದ್ಘಾಟನೆಯನ್ನು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ ನೆರವೇರಿಸಿದರು.

ಜಿಲ್ಲಾ ಕಾರ್ಯದರ್ಶಿಗಳಾದ ನವಾಝ್ ಕಟ್ಟೆ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಸಾರ್ವಜನಿಕ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ ರವರು ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಭಾಷಣ ಮಾಡಿದರು.

ರಾಜ್ಯ ಸಮಿತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಂಗಡಿ ಚಂದ್ರು ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ನವಾಝ್ ಕಟ್ಟೆ ಅವರನ್ನು ಚಾರ್ಮಾಡಿ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಕ್ಕಿಂಜೆ ಮಸೀದಿ ಅಧ್ಯಕ್ಷರು ಇಸ್ಮಾಯಿಲ್ ಗೊಳಿದಡಿ, ಮಸೀದಿ ಕಾರ್ಯದರ್ಶಿಗಳಾದ ಇಬ್ರಾಹಿಂ ಬೊಂಟ್ರಪಾಲ್, ಚಾರ್ಮಾಡಿ ಮಸೀದಿ ಮಾಜಿ ಅಧ್ಯಕ್ಷರು ಫಾಳ್ಕನ್ ಮೋನು, ಎಸ್‌ಡಿಪಿಐ ಬೆಂಬಲಿತ ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ದೀಕ್ ಹಾಗೂ ಆಯಿಷಾ, ಮಾಜಿ ಪಂಚಾಯತ್ ಸದಸ್ಯರು ಸಿ ಮೋನಕ, ಉಜಿರೆ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಆಲಿ ಉಜಿರೆ ಹಾಗೂ ಊರಿನ ನಾಗರೀಕರು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಶ್ರಫ್ ಚಾರ್ಮಾಡಿ ಅತಿಥಿಗಳನ್ನು ಸ್ವಾಗತಿಸಿ, ಸಹಲ್ ನಿರ್ಸಾಲ್ ಧನ್ಯವಾದಗೈದರು. ಮರ್ಷಾ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!