March 20, 2026

ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ: SDPI ವಿಟ್ಲ ಬ್ಲಾಕ್ ವತಿಯಿಂದ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನ

0
image_editor_output_image1266132571-1740212026387.jpg

ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ SDPI ವಿಟ್ಲ ಬ್ಲಾಕ್ ವತಿಯಿಂದ ವಿಟ್ಲದ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಸಹಿ ಸಂಗ್ರಹ ನಡೆಯಿತು.

SDPI ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ಸಹಿ ಹಾಕುವ ಮುಕಾಂತರ ಅಭಿಯಾನ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರ ಸಮಿತಿ ಕೋಶಾಧಿಕಾರಿ ಮುಸ್ತಫ D. B ಒಕ್ಕೆತೂರ್, SDPI ವಿಟ್ಲ ಬ್ಲಾಕ್ ಅಧ್ಯಕ್ಷರಾದ ಕಮರುದ್ದೀನ್ ಪುಣಚ,ಕಾರ್ಯದರ್ಶಿ ರಹೀಮ್ ಕಂಬಳಬೆಟ್ಟು,ಸಮಿತಿ ಸದಸ್ಯರಾದ ಶಾಫಿ ಪುಣಚ, ಪಟ್ಟಣ ಸಮಿತಿ ಸದಸ್ಯರಾದ ಹೈದರ್ ಅಲಿ ಮೇಗಿನಪೇಟೆ, ಇಬ್ರಾಹಿಂ ಒಕ್ಕೆತ್ತೂರ್, ಸೇರಿದಂತೆ ಪಕ್ಷದ ಬ್ರಾಂಚ್ ಮಟ್ಟದ ನಾಯಕರು, ಕಾರ್ಯಕರ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!