ಮಂಗಳೂರಿನ ಎಮ್ಮೆಕೆರೆ ಬಳಿ ನಡೆದ ಫುಟ್ಬಾಲ್ ಟೂರ್ನಮೆಂಟ್ ಒಂದರಲ್ಲಿ ಪ್ರೇಕ್ಷಕರ ಗ್ಯಾಲರಿ ಕುಸಿತಗೊಂಡ ಘಟನೆ ನಡೆದಿದೆ.
ಘಟನೆಯಿಂದ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಎಲ್ಲರೂ ಪಾರಾಗಿದ್ದಾರೆ.
ಫೆ.8 ರಂದು ರಾತ್ರಿ BSL ವತಿಯಿಂದ ಆಯೋಜಿಸಿದ್ದ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಪ್ರೇಕ್ಷಕರ ಗ್ಯಾಲರಿ ಕುಸಿತಗೊಂಡಿರುವ ಘಟನೆಯ ದೃಶ್ಯ ಇದೀಗ ವೈರಲ್ ಆಗಿದೆ.
