March 15, 2026

ಮಂಗಳೂರು: ಎಸ್ಎಲ್ವಿ ಬುಕ್ ಹೌಸ್ ಮೇರಿಹಿಲ್ ನ ನೂತನ ಶಾಖೆ ಶುಭಾರಂಭ

0
image_editor_output_image2144920308-1739778495744.jpg

ಮಂಗಳೂರು: ಎಸ್ ಎಲ್ ವಿ ಬುಕ್ ಹೌಸ್ ನೂತನ ಶಾಖೆ ಮಂಗಳೂರಿನ ಮೇರಿಹಿಲ್ ನಲ್ಲಿ ಶುಭಾರಂಭಗೊಂಡಿತು.

ನೂತನ ಶಾಖೆಯನ್ನು ಶ್ರೀಮತಿ ಚೆನ್ನಮ್ಮ ಮದನ ಗೌಡ ರವರು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕಟೀಲಿನ ಮುಖ್ಯ ಅರ್ಚಕರಾದ ವೆಂಕಟರಮಣ ಅಸ್ರಣ್ಣನವರು ದೀಪ ಬೆಳಗಿಸಿ ಶುಭ ಹಾರೈಸಿದರು.

ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪಕಳ ನೂತನ ಮಳಿಗೆಗೆ ಶುಭ ಹಾರೈಸಿದರು. ರಾಜ್ಯದಾದ್ಯಂತ ಹೆಸರು ವಾಸಿಯಾಗಿರುವ ಎಸ್ ಎಲ್ ವಿ ಬುಕ್ ಹೌಸ್ ಮಂಗಳೂರು ಬೆಂಗಳೂರು ಮೈಸೂರು, ಚಾಮರಾಜನಗರ ಮೂಡಬಿದ್ರೆ ಮುಂತಾದ ಕಡೆಗಳಲ್ಲಿ ತನ್ನ ಶಾಖೆಯನ್ನು ಹೊಂದಿದ್ದು ಎಸ್ ಎಲ್ ವಿ ಏಜೆನ್ಸಿಸ್ ಎಸ್ ಎಲ್ ವಿ ಬುಕ್ಸ್ ಇಂಡಿಯಾ ಪ್ರೈ ಲಿ. ಎಂಬ ಸಂಸ್ಥೆಯು ಅನೇಕ ವಿದ್ಯಾಲಯಗಳಿಗೆ ಪುಸ್ತಕ ವಿತರಣೆ ಮಾಡುತ್ತಿದೆ.

ದಿವಾಕರ್ ದಾಸ್ ನೆರ್ಲಾಜೆ ಮಾಲಕತ್ವದ ಎಸ್ ಎಲ್ ವಿ ಸಂಸ್ಥೆಯು ನೂತನ ಮಳಿಗೆಯ ಶುಭ ಸಮಾರಂಭದಲ್ಲಿ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರು, ಕರ್ನಾಟಕ ಕುಸ್ತಿ ಸಂಘದ ಮೀಡಿಯಾ ಅಕ್ರಿಡಿಯೇಶನ್ ಸದಸ್ಯರಾದ ರಾಮ್ ದಾಸ್ ಶೆಟ್ಟಿ ಉದ್ಯಮಿ ಸದಾಶಿವ ದಾಸ್, ರಘುರಾಮ್ ದಾಸ್ ಮತ್ತು ಯಶೋಧ ಪೆರ್ಡೋರು, ಡಾ. ರಾಜ್ ಗೋಪಾಲ್, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಿವಾಕರ್ ದಾಸ್ ಶ್ರೀಮತಿ ಹೇಮಾವತಿ ದಿವಾಕರ್ ದಾಸ್, ಮತ್ತು ಎಸ್ ಎಲ್ ವಿ ಬುಕ್ ಹೌಸ್ ನ ಮುಖ್ಯ ವ್ಯವಸ್ಥಾಪಕರಾದ ರಾಜಾ ಅಂಚನ್, ನಂದ ಕುಮಾರ್, ವಜ್ರೇಶ್ವರಿ, ಶ್ಯಾಮಲಾ, ಸವಿತಾ, ಅತಿಥಿಗಳನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!