March 15, 2026

ಚಿಕ್ಕಮಗಳೂರು: ನದಿಗೆ ಈಜಲು ಸ್ನೇಹಿತರೊಂದಿಗೆ ತೆರಳಿದ್ದ ಯುವಕ ನೀರುಪಾಲು

0
image_editor_output_image135896590-1739778144785.jpg

ಚಿಕ್ಕಮಗಳೂರು: ಭದ್ರಾ ನದಿಗೆ ಈಜಲು ಸ್ನೇಹಿತರೊಂದಿಗೆ ತೆರಳಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಎನ್.ಆರ್.ಪುರ ತಾಲೂಕಿನ ಗಡಿಗೇಶ್ವರದಲ್ಲಿ ರವಿವಾರ ನಡೆದಿದೆ.

ಜಲಾಲ್(25) ನೀರುಪಾಲಾದ ಯುವಕ. ಮೂವರು ಸ್ನೇಹಿತರು ಬಾಳೆಹೊನ್ನೂರಿನ ಭದ್ರಾ ನದಿಗೆ ಈಜಲು ತೆರಳಿದ್ದರು. ಘಟನೆ ಸಂಬಂಧ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಜಲಾಲ್‌ ದೇಹಕ್ಕಾಗಿ ಶೋಧಕಾರ್ಯಾಚರಣೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!