ವಕ್ಫ್ ತಿದ್ದುಪಡಿ ಮಸೂದೆಯ ಜೆಪಿಸಿ ವರದಿ ವಿರೋಧಿಸಿ SDPI ವತಿಯಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರತಿಭಟನೆ
ಬೆಳ್ತಂಗಡಿ: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಶುಕ್ರವಾರ ಬೆಳ್ತಂಗಡಿ ತಾಲೂಕಿನಾದ್ಯಂತ ಭಿತ್ತಿಪತ್ರ ಪ್ರದರ್ಶನ, ಪಂಜು ಹಿಡಿಯುವ ಮೂಲಕ, ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟನೆ ಮಾಡಲಾಯಿತು.



ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪುಂಜಾಲಕಟ್ಟೆ, ಬಂಗೇರಕಟ್ಟೆ, ಕುದ್ರಡ್ಕ, ತೆಕ್ಕಾರು, ಮೂರುಗೋಳಿ, ಇಳಂತಿಲ, ಉಜಿರೆ, ಕಾಜೂರು, ಲಾಯಿಲ, ಕುಂಟಿನಿ, ಪುತ್ರಬೈಲು ನಲ್ಲಿ ಮಧ್ಯಾಹ್ನ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ವಿರೋಧಿಸಿ ಕಾರ್ಯಕರ್ತರು ಮತ್ತು ನಾಗರೀಕರು ಬಿತ್ತಿಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ಮಾಡಲಾಯಿತು.
ರಾತ್ರಿ ವೇಣೂರು ಬ್ಲಾಕ್ ವತಿಯಿಂದ ಅಶ್ರಫ್ ಬದ್ಯಾರು ನೇತೃತ್ವದಲ್ಲಿ ಗುರುವಾಯನಕೆರೆ ಜಂಕ್ಷನ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಸಮಿತಿ ಸದಸ್ಯರಾದ ನವಾಜ್ ಕಟ್ಟೆ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ಮುಸ್ತಾಫ ಜಿ. ಕೆರೆ, ನಿಜಾಮ್ ಕಟ್ಟೆ, ಕ್ಷೇತ್ರ ಕೋಶಾಧಿಕಾರಿ ಸ್ವಾಲಿ ಮದ್ದಡ್ಕ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಗರಿಕರು
ಉಪಸ್ಥಿತರಿದ್ದರು.
ಉಜಿರೆ ವ್ಯಾಪ್ತಿಯ ಟಿ.ಬಿ ಕ್ರಾಸ್ ಜಂಕ್ಷನ್ ನಲ್ಲಿ ಕುಂಟಿನಿ ಬ್ರಾಂಚ್ ಸಮಿತಿ ಅಧ್ಯಕ್ಷರಾದ ಆಸೀರ್ ಕುಂಟಿನಿ ನೇತೃತ್ವದಲ್ಲಿ ಪಂಜಿ ಹಿಡಿದು ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟಿಸಲಾಯಿತು. ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಸಹಲ್ ನಿರ್ಸಾಲ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉಜಿರೆ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಆಲಿ, ನಾಯಕರಾದ ಫಝಲ್ ಉಜಿರೆ, ಮಾರ್ಷ ಉಜಿರೆ, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಚಾರ್ಮಾಡಿ ಬ್ರಾಂಚ್ ವತಿಯಿಂದ ಸಫ್ವಾನ್ ಅಧ್ಯಕ್ಷತೆಯಲ್ಲಿ ಕಕ್ಕಿಂಜೆಯಲ್ಲಿ ಮಸೂದೆಯ ವರದಿಯನ್ನು ಬೆಂಕಿ ಹಾಕಿ ಸುಡುವ ಮೂಲಕ ಪ್ರತಿಭಟಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಬ್ಲಾಕ್ ಸಮಿತಿ ಸದಸ್ಯರಾದ ಅಶ್ರಫ್ ಚಾರ್ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ಸಿದ್ಧಿಕ್ ಯು.ಪಿ, ಮನ್ಸೂರ್ ಚಾರ್ಮಾಡಿ, ರಹೀಮ್ ಬೀಟಿಗೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.




ಬೆಳ್ತಂಗಡಿ ತಾಲೂಕಿನಾದ್ಯಂತ ಸುಮಾರು 20 ಕಡೆಗಳಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.





