ಮಂಜೇಶ್ವರ: ಫೆ.17ರಿಂದ ಗೋವಿಂದ ಪೈ ಕಾಲೇಜು ಬಾಷಂತರಕಾರರ 4ನೇ ಸಮಾವೇಶ
ಮಂಜೇಶ್ವರ: ಗೋವಿಂದ ಪೈ ಕಾಲೇಜಿನಲ್ಲಿ ಭಾಷಾಂತರ ಅಧ್ಯಯನ ವಿಭಾಗ ಹಂಪಿ ವಿಶ್ವವಿದ್ಯಾನಿಲಯ ಹಾಗೂ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಗೋವಿಂದ ಪೈ ಕಾಲೇಜಿನಲ್ಲಿ ಬಾಷಂತರಕಾರರ ನಾಲ್ಕನೇ ಸಮಾವೇಶ ಫೆ 17 ರಿಂದ ಫೆ 19 ರವರೆಗೆ ಕಾಲೇಜಿನ ಕ್ಯಾಂಪಸ್ ನ ಸಭಾಂಗಣದಲ್ಲಿ ನಡೆಯಲಿದೆ.
ಫೆ 17 ರಂದು ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ: ಡಿ.ವಿ. ಪರಮಶಿವ ಮೂರ್ತಿ ನಿರ್ವಹಿಸಲಿದ್ದು ಕಾಲೇಜು ಪ್ರಾಚಾರ್ಯರಾದ ಡಾ ಮುಹಮ್ಮದಾಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಭಾಷ್ ಪಟ್ಟಾಜೆ, ವಿಶ್ವನಾಥ ನಾಗಠಾಣ, ಮೋಹನ್ ಕುಂಠಾರು, ಎಸ್ ಡಿ ಎಂ ಕಾಲೇಜು ಉಜಿರೆ ಸಹ ಪ್ರಾಧ್ಯಾಪಕರಾದ ಡಾ ರಾಜಶೇಖರ ಹಳೆಮನೆ, ಡಾ ಅರುಣ್ ಕುಮಾರ್ ಎಸ್ ಆರ್ ಉಡುಪಿ, ವಿಕಾಸ್ ಹೊಸಮನಿ ತಾರನಾಥ ವರ್ಕಾಡಿ ಮೊದಲ ದವರು ಉಪಸ್ಥಿತರಿರುವರು.
ಫೆ 18 ರಂದು ಬೆಳಗ್ಗೆ ಬಾಷಂತರಕಾರರ ನಾಲ್ಕನೇ ಸಮಾವೇಶದ ಉದ್ಘಾಟನೆಯನ್ನು
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ: ಡಿ.ವಿ. ಪರಮಶಿವ ಮೂರ್ತಿ ನಿರ್ವಹಿಸಲಿದ್ದು ಕಾಲೇಜು ಪ್ರಾಚಾರ್ಯರಾದ ಡಾ ಮುಹಮ್ಮದಾಲಿ ಅಧ್ಯಕ್ಷತೆ ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ವಿಮರ್ಶಕರಾದ ಯು ಮಹೇಶ್ವರಿ, ಕಣ್ಣುರು ವಿವಿ ಸಿಂಡಿಕೇಟ್ ಸದಸ್ಯರಾದ ಸಜಿತ್ ಕುಮಾರ್, ಉಪ ಪ್ರಾಂಶುಪಾಲರಾದ ಸಚಿಂದ್ರನ್, ಅಗ್ನೇ ಶಾಯಿ, ಡಾ ಎಂ ಮಲ್ಲಿಕಾರ್ಜುನ ಗೌಡ, ಕಾಲೇಜು ಯುನಿಯನ್ ಚೆಯರ್ಮೇನ್ ದಾವೂದು, ಎಂ ಮೋಹನ ಕುಂಟಾರ್ , ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುವರು. ಸಮರೋಪ ಕಾರ್ಯಕ್ರಮ ಫೆ 19 ರಂದು ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ವಿಶ್ವವಿಧ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಡಾ ಎ ಮೋಹನ ಕುಂಟಾರ್ ವಹಿಸಲಿದ್ದು, ತಾಳ್ತಾಜೆ ವಸಂತ ಕುಮಾರ್, ಡಾ ಪ್ರಮೀಳ ಮಾಧವನ್ , ಚಿನ್ನಾ ಕಾಸರಗೋಡು, ಕಸಾಪ ಅಧ್ಯಕ್ಷರಾದ ಜಯಪ್ರಕಾಶ್ ತೊಟ್ಟತ್ತೋಡಿ, ಡಾ ಸುಜಿತ್ ಎಸ್, ಜಯಂತಿ ಕೆ, ಕಾಲೇಜಿನ ಸುಪರಿಂಟೆಂಡೆಂಟ್ ದಿನೇಶ್ ಕೆ ಎಸ್ ಉಪಸ್ಥಿತರಿರುವರು




