ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ಅಮಾಯಕನ ನರಬಲಿ

ಚಿತ್ರದುರ್ಗ: ಪಶ್ಚಿಮ ದಿಕ್ಕಿಗೆ ಹೋಗಿ ನರ ಬಲಿ ನೀಡಿದರೆ ನಿಧಿ ಸಿಗುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತು ನಂಬಿ ಅಮಾಯಕನನ್ನು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕು ಪರಶುರಾಂಪುರ ಠಾಣೆ ವ್ಯಾಪ್ತಿಯ ಜೆ.ಜೆ.ಕಾಲೋನಿ ನಿವಾಸಿ ಜಿ.ಎಚ್.ಪ್ರಭಾಕರ್ (50) ಕೊಲೆಯಾದ ವ್ಯಕ್ತಿ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಕುಂದಾರ್ಪಿ ಮಂಡಲದ ಕದರಾಂಪಲ್ಲಿ ಗ್ರಾಮದ ಆನಂದ ರೆಡ್ಡಿ ಪಾವಗಡದ ಹೊಟೇಲ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡಿಕೊಂಡಿದ್ದ. ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದ ಕಾರಣ ಆತ ಆಗಾಗ ಪಾವಗಡ ತಾಲೂಕು ಕೋಟೆಗುಡ್ಡ ಗ್ರಾಮದ ಜ್ಯೋತಿಷಿ ರಾಮಕೃಷ್ಣ ಬಳಿ ಹೋಗುತ್ತಿದ್ದ ಆಗ ರಾಮಕೃಷ್ಣ. “ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಡು ಆಗ ನಿಧಿ ಸಿಗುತ್ತದೆ ಹಣಕಾಸು ಸಮಸ್ಯೆದೂರವಾಗುತ್ತದೆ’ ಎಂದು ಹೇಳಿದ್ದ.