ಕಾಸರಗೋಡು: 10ಕ್ಕೂ ಅಧಿಕ ಪ್ರಕರಣಗಳ ಆರೋಪಿಯ ಬಂಧನ

ಕಾಸರಗೋಡು: ಮಾದಕ ವಸ್ತು ಸಂಬಂಧಿತ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಉಳಿಯತ್ತಡ್ಕ ಎಸ್. ಪಿ ನಗರದ ಮೊಯ್ದೀನ್ ಎಂ. ಎಚ್ (28) ಬಂಧಿತ ಆರೋಪಿ. ಕಾಫಾ ಕಾಯ್ದೆಯಂತೆ ಈತನನ್ನು ಬಂಧಿಸಲಾಗಿದೆ. ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರು ಈತ ಪೊಲೀಸರ ಕೈಗೆ ಸಿಗದೆ ತಲೆಮರೆಸಿ ಕೊಂಡಿದ್ದನು.
2019 ರಲ್ಲಿ ಗಾಂಜಾ , 2021 ರ್‍ಯಾಲಿಯಲ್ಲಿ ಓರ್ವನನ್ನು ಅಪಹರಿಸಿದ್ದ ಪ್ರಕರಣ,2023 ರಲ್ಲಿ ಗಾಂಜಾ ಬಳಕೆ, 2024 ರಲ್ಲಿ ಹೊಡೆದಾಟ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಇದೀಗ ಕಾಸರಗೋಡು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.