March 10, 2026

ಪತಿಯ ಜಿಮ್ ಸೆಂಟರ್ ನಲ್ಲೇ ನೇಣಿಗೆ ಶರಣಾದ ಪತ್ನಿ

0
image_editor_output_image1541863390-1739255985872.jpg

ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬರು ಪತಿಯ ಜಿಮ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಕೆಸ್ತೂರು ಗ್ರಾಮದ ಗಿರೀಶ್ ಪತ್ನಿ ದಿವ್ಯ (31) ಆತ್ಮಹತ್ಯೆ ಶರಣಾದ ಮಹಿಳೆಯಾಗಿದ್ದು, ಮೃತರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯಿದ್ದಾರೆ. ಕುಟುಂಬ ಕಲಹದಿಂದ ಬೇಸತ್ತು ಸೋಮವಾರ ಮಧ್ಯಾಹ್ನ ಜಿಮ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮಾಚಳ್ಳಿ ಗ್ರಾಮದ ಗೋವಿಂದರವರ ಪುತ್ರಿ ದಿವ್ಯ ಅವರನ್ನು ಕಳೆದ ಎಂಟು ವರ್ಷಗಳ ಹಿಂದೆ ಕೆಸ್ತೂರು ಗ್ರಾಮದ ಗಿರೀಶ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು.

ಕಳೆದ ಎರಡು ವರ್ಷಗಳ ಹಿಂದೆ ದಂಪತಿಗಳಿಬ್ಬರು ಕೆಸ್ತೂರು ಗ್ರಾಮದಲ್ಲಿ ವೈಭವ್ ಫಿಟ್ನೆಸ್ ಎಂಬ ಜಿಮ್ ಅನ್ನು ತೆರೆದು ಜೀವನ ಸಾಗಿಸುತ್ತಿದ್ದೆರನ್ನಲಾಗಿದೆ.

ಎಂದಿನಂತೆ ಜಿಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿವ್ಯ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಪತಿ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!