ಕಾರವಾರ: ರಸ್ತೆ ಬದಿ ತಿರುವಿಗೆ ಗುದ್ದಿ ಪಲ್ಟಿಯಾದ ಬಸ್: 50 ಜನ ಪ್ರಯಾಣಿಕರು ಅಪಾಯದಿಂದ ಪಾರು

ಕಾರವಾರ: ಸಾಗರ ದಿಂದ ಹೊನ್ನಾವರಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹೊನ್ನಾವರ ಸಮೀಪ ಸೂಳೆ ಮುರ್ಕಿ ಎಂಬಲ್ಲಿ ರಸ್ತೆ ಬದಿ ತಿರುವಿಗೆ ಗುದ್ದಿ ಪಲ್ಟಿಯಾಗಿದೆ. 50 ಜನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸಣ್ಣ ಪುಟ್ಟ ಗಾಯಗಳು ಆಗಿವೆ. ಚಾಲಕ ಸಹ ಅಪಾಯದಿಂದ ಪಾರಾಗಿದ್ದಾನೆ. ಬಸ್ ನಿಯಂತ್ರಣ ತಪ್ಪಿ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದೆ. ಹೆಚ್ಚಿನ ಅನಾಹುತ ತಪ್ಪಿದೆ.