ಕಲ್ಲಡ್ಕ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆಶ್ರಯದಲ್ಲಿ ತಹ್ಸಿನುಲ್ ಖಿರಾಃ ಕುರ್‌ಆನ್ ಅಧ್ಯಯನ ತರಗತಿ ಉದ್ಘಾಟನೆ
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಆಶ್ರಯದಲ್ಲಿ ಮುಹಿಯುದ್ದೀನ್ ಜುಮಾ ಮಸ್ಜಿದ್ ಕಲ್ಲಡ್ಕ ಇದರ ಸಹಭಾಗಿತ್ವದಲ್ಲಿ ಆರು ದಿನಗಳ ತಹ್ಸಿನುಲ್ ಖಿರಾಃ ಕುರ್‌ಆನ್ ಅಧ್ಯಯನ ತರಗತಿಯ ಉದ್ಘಾಟನೆಯು ಜನವರಿ 24 ಶುಕ್ರವಾರ ಇಶಾ ನಮಾಝ್ ಬಳಿಕ ಕಲ್ಲಡ್ಕ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಕುರ್‌ಆನ್ ನಿರರ್ಗಳವಾಗಿ ತಜ್ವೀದಿನ ನಿಯಮಗಳ ಅನುಸಾರ ಓದಲು ಸಹಕಾರಿಯಾಗಳು ಬೇಕಾಗಿ ಈ ತರಗತಿಯನ್ನು ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಈ ಕುರ್‌ಆನ್ ಅಧ್ಯಯನ ತರಗತಿಯು ಕಲ್ಲಡ್ಕ ಜಮಾಅತ್ ನಲ್ಲಿ ನಡೆಯುತ್ತಿದೆ. ಎರಡು ಬ್ಯಾಚ್ ಮೂಲಕ ತರಗತಿಯು ನಡೆಯುತ್ತಿದ್ದು,40ಕ್ಕೂ ಹೆಚ್ಚಿನ ನಾಗರಿಕರು ಈ ತರಗತಿಯ ಸದುಪಯೋಗವನ್ನು ಪಡೆಯುತ್ತಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ. ಅಬ್ದುಲ್ಲಾ ಕೋಡಿ ವಹಿಸಿದ್ದರು.ಅಬೂಬಕ್ಕರ್ ಸಿದ್ದೀಕ್ ಪನಾಮಾ ಪ್ರಾಸ್ತಾವಿಕವಾಗಿ ಮಾತನಾಡಿದರು,ರಿಯಾಝ್ ಮೌಲವಿ ಕಾಸರಗೋಡು ತರಗತಿಯನ್ನು ನಡೆಸಿಕೊಟ್ಟರು, ಖತೀಬ್ ಉಸ್ತಾದರಾದ ಉಸ್ಮಾನ್ ಫೈಝಿ ದುವಾ ನೆರವೇರಿಸಿದರು.ಕಲ್ಲಡ್ಕ ಜಮಾತಿನ ಆಡಳಿತ ಸಮಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.





