ಉಡುಪಿ: ವಂಚನೆ ಪ್ರಕರಣದ ಆರೋಪಿಗಳ ಬಂಧನ, ಆರೋಪಿಗಳ ಸಹಿತ 9.56 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ
ಉಡುಪಿ:ವಂಚನೆ ಪ್ರಕರಣದ ಆರೋಪಿಗಳ ಬಂಧಿಸಿ ಹಣ ಮತ್ತು ಇತರೆ ವಸ್ತುಗಳನ್ನು ಸೇರಿ ಒಟ್ಟು ರೂ, 9,56,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ದಿನಾಂಕ: 09/01/2025 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂತೋಷ ಎ ಎಂಬವರು ದೂರು ದಾಖಲಿಸಿದ್ದು, ದೂರುದಾರರು ಡಾಕ್ಟರ್(General Medicine) ವಿಧ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದು, ಹೆಚ್ಚಿನ M.PH ವಿಧ್ಯಾಭ್ಯಾಸನ್ನು ಯುಕೆ ಯಲ್ಲಿ ಮಾಡಲು ದುಬೈಗೆ ತೆರಳಿ ಅಫ್ತಾಬ್ ರವರನ್ನು ಭೇಟಿ ಮಾಡಿದ್ದು , ನಂತರ UK ಯಲ್ಲಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿದ್ದು, ಅಫ್ತಾಬ್ ದೂರುದಾರರಿಗೆ ಕರೆ ಮಾಡಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದು, ಫಿರ್ಯಾದುದಾರರು NRA ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮಾ ಮಾಡಲು ಅಫ್ತಾಬ್ ನು ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್ ಎಂಬುವವರನ್ನು ಭೇಟಿ ಆಗುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದುದಾರರು ಉಡುಪಿಗೆ ಆಗಮಿಸಿ ಸುಮನ್ ಎಸ್ ರವರನ್ನು ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಎಂಟಿಆರ್ ಹೋಟೆಲ್ ನ ಹತ್ತಿರ ಭೇಟಿಯಾದ ನಂತರ ಆರೋಪಿತರನ್ನು ನಂಬಿ ಫಿರ್ಯಾದುದಾರರು ರೂ 8.5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದು, ನಂತರ ಆರೋಪಿಗಳು ಫಿರ್ಯಾದುದಾರರ ಕರೆಯನ್ನು ಸ್ವೀಕರಿಸದೇ ಇದ್ದು, ಆರೋಪಿತರು ಫಿರ್ಯಾದುದಾರರಿಗೆ ಯುಕೆಯಲ್ಲಿ M.PH ವಿಧ್ಯಾಭ್ಯಾಸವನ್ನು ಮಾಡಲು ಸೀಟನ್ನು ಕೊಡಿಸುತ್ತೇವೆ ಎಂದು ನಂಬಿಸಿ, ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 07/2025 ಕಲಂ: 316(2) 318(2) ಜೊತೆ 3(5) BNS ನಂತೆ ಪ್ರಕರಣ ದಾಖಲಾಗಿರುತ್ತದೆ.




