March 18, 2026

ಮಂಗಳೂರು: ಶಟ್ಲ್ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಸಾವು

0
image_editor_output_image1451795584-1737015976198.jpg

ಮಂಗಳೂರು: ಗೆಳೆಯರೊಂದಿಗೆ ಶಟ್ಲ್ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಫಳ್ನೀರ್‌ನಲ್ಲಿ ಬುಧವಾರ ನಡೆದಿದೆ. ಮೃತ ಯುವಕನ್ನು ಅತ್ತಾವರದಲ್ಲಿ ವಾಸಿಸುತ್ತಿರುವ ಶರೀಫ್ ಅವರ ಪುತ್ರ ಶಹೀಮ್ (20) ಎಂದು ಗುರುತಿಸಲಾಗಿದೆ.

ಶಹೀಮ್ ಗೆಳೆಯರೊಂದಿಗೆ ಬುಧವಾರ ಶಟ್ಲ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದರು ಎಂಗು ಹೇಳಲಾಗಿದ್ದು, ಈ ವೇಳೆ ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!