ಮೂಡುಬಿದಿರೆ: ಗೂಡಂಗಡಿಯಿಂದ ಸೊತ್ತುಗಳ ಕಳವು: ಆರೋಪಿಗಳ ಬಂಧನ
ಮೂಡುಬಿದಿರೆ: ನಗರದ ಹೊರವಲಯದಲ್ಲಿ ಪುತ್ತಿಗೆ ಗ್ರಾಮದ ಮೂಲ್ಕಿ ಕ್ರಾಸ್ ಬಳಿ ಜ. 9ರಂದು ರಾತ್ರಿ ಜಯಶ್ರೀ ಸ್ಟೋರ್ ಹೆಸರಿನ ಗೂಡಂಗಡಿಯ ಛಾವಣಿ ಶೀಟ್‌ಗಳನ್ನು ತೆರೆದು 20,000 ರೂ. ನಗದು, 48,000 ರೂ. ಮೌಲ್ಯದ ಸಿಗರೇಟು, ಪಾನೀಯ, ತಿಂಡಿತಿನಿಸು ಮೊದಲಾದ ಸೊತ್ತುಗಳನ್ನು ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆ ತಾಲೂಕು ನಿಡ್ಡೋಡಿ ನೀರುಡೆಯ ರೋಷನ್ ಕ್ವಾಡ್ರಸ್ (37), ಕೊಂಪದವು ನೆಲ್ಲಿತೀರ್ಥದ ನಿಶಾಂಕ್ ಪೂಜಾರಿ (18), ನೀರುಡೆ 5 ಸೆಂಟ್ಸ್‌ನ ರೋಹಿತ್ ಮಸ್ಕರೇನ್ಹಸ್ (21) ಬಂಧಿತರು.
ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಸ್ಕೂಟರ್ ಮತ್ತು 5,000 ರೂ. ನಗದು ಹಣ ಸಹಿತ ಒಟ್ಟು 3.55 ಲಕ್ಷದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.




