ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಲೆಗೈದ ಪತ್ನಿ: ಪ್ರಿಯಕರನ ಬಂಧನ
ಹಾಸನ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಲೆಗೈದ ಘಟನೆ ಅರಸೀಕೆರೆಯ ಹೊರ ವಲಯದ ತಿರುಪತಿ ಕ್ರಾಸ್ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮುಜಾಮಿಲ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಯಾಸೀನ್ ಕೊಲೆಗೈದ ಆರೋಪಿಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಮುಜಾಮಿಲ್ ಅಡ್ಡಿಯಾಗಿದ್ದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಕೊಲೆಯಾದ ಮುಜಾಮಿಲ್‍ನ ಪತ್ನಿ ಜೊತೆ ಯಾಸೀನ್ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಪತ್ನಿ ಜೊತೆ ಮುಜಾಮಿಲ್ ಜಗಳವಾಡುತ್ತಿದ್ದ. ಇದರಿಂದ ಆತನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಹಾಗೂ ಯಾಸೀನ್ ಡಿ.15ರಂದು ಮದ್ಯ ಸೇವಿಸಿದ್ದ ಮುಜಾಮಿಲ್‍ನನ್ನು ನಗರದ ಹೊರ ವಲಯಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದರು. ಬಳಿಕ ಶವವನ್ನು ಚರಂಡಿಗೆ ಹಾಕಿ ಮೂರು ದಿನಗಳ ಕಾಲ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅಲ್ಲದೇ ಹೊಗೆ ಬರದಂತೆ ಗುಜರಿ ಅಂಗಡಿಯಿಂದ ಕಬ್ಬಿಣದ ವಸ್ತುಗಳನ್ನು ತಂದು ಚರಂಡಿ ಮುಚ್ಚಿದ್ದರು.





