February 4, 2026

ವಿಟ್ಲದ ಮಾಣಿ ಸಮೀಪ ಬೈಕ್ ಅಪಘಾತ: ಬೆಳ್ತಂಗಡಿ ಮುರದ ಬಾಲಕ ಮೃತ್ಯು- ಹಲವರಿಗೆ ಗಾಯ

0
image_editor_output_image941869968-1735406706610

ಮಾಣಿ: ಬೆಳ್ತಂಗಡಿ ತಾಲೂಕಿನ ಮುರದ ಕುಟುಂಬ ಸಂಚರಿಸುತ್ತಿದ್ದ ಬೈಕ್ ಈಚರ್ ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 6 ವರ್ಷದ ಮಗು ಮೃತಪಟ್ಟಿದ್ದು, ತಂದೆ-ತಾಯಿ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ  ಸಂಭವಿಸಿದೆ.

ಮೃತ ಮಗುವನ್ನು ಬೆಳ್ತಂಗಡಿ ತಾಲೂಕಿನ ನಾವೂರು ಸಮೀಪದ ಮುರ ನಿವಾಸಿ ಅಬ್ದುಲ್ ಸಲೀಂ ಅವರ ಹಿರಿಯ ಪುತ್ರ ಶಾಝಿನ್ (6) ಎಂದು ಗುರುತಿಸಲಾಗಿದೆ. ಸಲೀಂ ಅವರು ತನ್ನ ಪತ್ನಿ-ಮಕ್ಕಳೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗಡಿಯಾರ ಎಂಬಲ್ಲಿ ಈಚರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಪಘಾತದಿಂದ ಬೈಕಿನಲ್ಲಿದ್ದ 6 ವರ್ಷದ ಮಗು ಶಾಝಿನ್ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಗಾಯಗೊಂಡ ಅಬ್ದುಲ್ ಸಲೀಂ, ಅವರ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!