ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ: ಚರ್ಚ್ ಗಳಲ್ಲಿ ವಿಶೇಷ ಪೂಜೆ
ಮಂಗಳೂರು: ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ದೇವ ಪುತ್ರ ಯೇಸುಕ್ರಿಸ್ತರ ಜನ್ಮದಿನಾಚರಣೆಯನ್ನು ಪೂರ್ವದ ರೋಮ್ ಎಂದೇ ಜನಜನಿತವಾದ ಕರಾವಳಿ ನಗರ ಮಂಗಳೂರಿನಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ಮಂಗಳೂರಿನ ಹೊಸ ಪಿಜ್ಜಾ ರೆಸ್ಟೋರೆಂಟ್
ಹಬ್ಬದ ಸಲುವಾಗಿ ನಗರದ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳು ಜಗಮಗಿಸುವ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿತ್ತು. ಎಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಸಡಗರ, ಚರ್ಚ್‌ಗಳಲ್ಲಿ ವಿಶೇಷ ಸಂಭ್ರಮದ ಪೂಜೆಗಳು ನಡೆದವು. ಸಾವಿರಾರು ಕ್ರೈಸ್ತ್ ಭಾಂಧವರು ಭಕ್ತಿಯಿಂದ ಪೂಜೆ ಮತ್ತು ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡರು.