December 22, 2024

ಕಾಸರಗೋಡು: ಬೆಂಕಿ ಅನಾಹುತ- ಆರು ಅಂಗಡಿಗಳು ಬೆಂಕಿಗಾಹುತಿ !!

0

ಕಾಸರಗೋಡು: ಆರು ಅಂಗಡಿಗಳಿಗೆ ದಿಢೀರನೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಶನಿವಾರ ತಡರಾತ್ರಿ ಪೆರ್ಲ ಬಳಿ ನಡೆದಿದೆ.

ಪೆರ್ಲ ಪೇಟೆಯಲ್ಲಿ ಇರುವಂತಹ ಪೂಜಾ ಫ್ಯಾನ್ಸಿ , ಗೋಪಿನಾಥ್ ಪೈ ಕ್ಲೋತ್ ಸೆಂಟರ್, ಪತ್ರಿಕಾ ವಿತರಣಾ ಮಳಿಗೆ, ಪ್ರವೀಣ್ ಆಟೋ ಮೊಬೈಲ್, ಸಾದತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಮೊದಲಾದವು ಸಂಪೂರ್ಣ ಅ*ಗ್ನಿಗಾ*ಹುತಿಯಾಗಿರುವ ಅಂಗಡಿಗಳು ಎಂದು ಗುರುತಿಸಲಾಗಿದೆ.

ಮೂರು ಗಂಟೆಗೂ ಅಧಿಕ ಸಮಯದ ಬಳಿಕ ಬೆಂ*ಕಿಯನ್ನು ನಂದಿಸಲಾಯಿತು. ಶಾ*ರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ರಾತ್ರಿ 12ಗಂಟೆ ಸುಮಾರಿಗೆ ಘಟನೆ ನಡೆದಿದ್ದು , ಉಪ್ಪಳ ಕಾಸರಗೋಡಿನಿಂದ ಆಗಮಿಸಿದ ಐದು ಅ*ಗ್ನಿಶಾಮಕ ದಳದ ಸಿಬ್ಬಂದಿ‌ ಹಾಗೂ ಸ್ಥಳೀಯರ ಸಹಕಾರದಿಂದ ಬೆಂ*ಕಿಯನ್ನು ನಂದಿಸಿ ಹೆಚ್ಚಿನ ಅ*ನಾಹುತ ತಪ್ಪಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!