ವಿಟ್ಲ: ಅಂಬೇಡ್ಕರ್ ಗೆ ಅವಮಾನ ಮಾಡಿದ ವಿಚಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ SDPI ಪ್ರತಿಭಟನೆ
ವಿಟ್ಲ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ SDPI ಕೊಳ್ನಾಡು ಮತ್ತು ವಿಟ್ಲ ಬ್ಲಾಕ್ ಸಮಿತಿ ವತಿಯಿಂದ ವಿಟ್ಲ ಖಾಸಗಿ ಬಸ್ ನಿಲ್ದಾಣ ಬಳಿ ಪ್ರತಿಭಟನೆ ಸಭೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಬ್ಲಾಕ್ ಸಮಿತಿ ಅಧ್ಯಕ್ಷರಾದ ಕಮರುದ್ದಿನ್ ಪುಣಚ ವಹಿಸಿದರು. ಅಂಬೇಡ್ಕರ್ ಈ ದೇಶಕ್ಕೆ ತನ್ನ ಇಡೀ ಜೀವನವನ್ನು ತ್ಯಾಗ ಮಾಡಿ ದೇಶವನ್ನು ಜ್ಯಾತಿಯತೀತ ರಾಷ್ಟ್ರ ವನ್ನಾಗಿ ಮಾಡಿದ ಅಂಬೇಡ್ಕರ್ ರವರನ್ನು ನಿಂದಿಸಿದ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಟ್ಟು ಸಂವಿದಾನಕ್ಕೆ ಮೌಲ್ಯಕ್ಕೆ ಬೆಲೆ ನೀಡಲಿ ಎಂದು ದಿಕ್ಸೂಚಿ ಭಾಷಣ ಮಾಡಿದ ಪುತ್ತೂರು ಕ್ಷೆತ್ರ ಸಮಿತಿ ಅಧ್ಯಕ್ಷರಾದ ಕೆ.ಎ ಸಿದ್ದೀಕ್ ಮಾತನಾಡಿದರು ಮತ್ತು ಈ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಯಾದ ಶಾಕೀರ್ ಅಳಕೆಮಾಜಲ್, ಕ್ಷೇತ್ರ ಸಮಿತಿ ಸದಸ್ಯರಾದ ಸಿರಾಜ್ ಕೂರ್ನಡ್ಕ, ವಿಟ್ಲ ಪಡ್ನೂರ್ ಪಂಚಾಯತ್ ಸದಸ್ಯರಾದ ಮಹಮ್ಮದ್ ಕಡಂಬು, ಕೊಲ್ನಾಡು ಬ್ಲಾಕ್ ಕಾರ್ಯದರ್ಶಿಯಾದ ಮಹಮ್ಮದ್ ಅಲಿ, ಕೊಲ್ನಾಡ್ ಬ್ಲಾಕ್ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ ಸ್ವಾಗತಿಸಿ, ವಿಟ್ಲ ಬ್ಲಾಕ್ ಕಾರ್ಯದರ್ಶಿ ರಹೀಮ್ ಕಂಬಳಬೆಟ್ಟು ವಂದಿಸಿದರು.