December 18, 2024

3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

0

ಚಿಕ್ಕೋಡಿ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ.

ರಮ್ಯಾಶ್ರೀ ಬಸವರಾಜ ಹಂಪನ್ನವರ (25) ಮೃತ ಮಹಿಳೆ. ಅನಾರೋಗ್ಯದ ಸಮಸ್ಯೆಯಿಂದ ಮಹಿಳೆ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ರಮ್ಯಾಶ್ರೀ ಕಳೆದ ನಾಲ್ಕು ವರ್ಷದ ಹಿಂದೆ ಬೇರೆ ಮದುವೆ ಆಗಿ ಪತಿಯಿಂದ ಬೇರ್ಪಟ್ಟಿದ್ದಳು.

ಬಳಿಕ ಮೂರು ತಿಂಗಳ ಹಿಂದೆ ನಿಡಗುಂದಿ ಗ್ರಾಮದ ಬಸವರಾಜ ಹಂಪನ್ನವರ ಎಂಬವರನ್ನು ಮದುವೆ ಆಗಿದ್ದಳು. ಮೊದಲನೆ ಮದುವೆಯಾಗಿ ನಾಲ್ಕು ವರ್ಷ ಸಂಸಾರ ನಡೆಸಿದ್ದಳು. ಬಳಿಕ ಮತ್ತೊಂದು ಮದುವೆ ಆಗಿ ಕೇವಲ ಮೂರೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾಶ್ರೀ ಶವ ಪತ್ತೆಯಾಗಿದೆ. ಇದನ್ನೂ ಓದಿ: ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

 

 

ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಕಂಡು ಪತಿ ಬಸವರಾಜ ಕೂಡ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಭಯಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಸದ್ಯ ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಪತಿ ಬಸವರಾಜ್ ಹಂಪನ್ನವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!