February 4, 2026

ಶಾಲಾ ಶಿಕ್ಷಕನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ಯುವತಿಯ ಕುಟುಂಬ

0
n64337427717342478509331ac05819bb5a58eb87b12f2e2b83584b8e55a01619278317e22bf71116d4278e.jpg

ಬಿಹಾರ್: ಶಾಲಾ ಶಿಕ್ಷಕನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸದ್ಯ ಅವಿನಾಶ್‌ ಹಾಗೂ ಗುಂಜನ ವಿವಾಹ ಒತ್ತಾಯ ಪೂರ್ವಕವಾಗಿ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಘಟನೆಯಲ್ಲಿ ಯುವತಿಯ ಹೇಳಿಕೆಯಂತೆ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚಿಗೆ ನನ್ನಿಂದ ದೂರವಾಗಿದ್ದಾನೆ ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಇಬ್ಬರೂ ಜೊತೆಯಾಗಿ ತಿರುಗಾಡುತ್ತಿದ್ದೆವು. ಆದರೆ ಈಗ ನನ್ನನ್ನು ದೂರ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಆದರೆ ಇದನ್ನು ಸುಳ್ಳು ಎಂದು ಹೇಳಿದ ಶಿಕ್ಷಕ ಆಕೆ ನನ್ನ ಮೊಬೈಲ್ ನಂಬರ್ ಪಡೆದುಕೊಂಡು ನನ್ನನ್ನು ಬೆದರಿಸುತಿದ್ದಳು. ಆದರೆ ನಾನು ಆಕೆಯ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಇದಾದ ಬಳಿಕ ಬೇರೆ ನಂಬರ್ ನಿಂದ ಕರೆ ಮಾಡಿ ನನಗೆ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಿದ್ದಾನೆ.

ಬಿಹಾರದ ಬೇಗುರ್ಸರಾಯ್ ಜಿಲ್ಲೆಯ ರಾಜೌರಾ ನಿವಾಸಿ ಅವನೀಶ್ ಗೆ ಇತ್ತೀಚೆಗೆ ಕತಿಹಾರ್ ಜಿಲ್ಲೆಯಲ್ಲಿ ಸರಕಾರಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಅದೇ ರೀತಿ ಆತ ಕತಿಹಾರ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗಿಬರುತ್ತಿದ್ದ. ಗುರುವಾರ ಬೆಳಿಗ್ಗೆ ಬೈಕ್ ನಲ್ಲಿ ಶಾಲೆಗೆ ತೆರಳುವ ವೇಳೆ ಕಾರಿನಲ್ಲಿ ಬಂದ ತಂಡ ಹಣೆಗೆ ಬಂದೂಕು ಇಟ್ಟು ಶಿಕ್ಷಕನನ್ನು ಅಪಹರಿಸಿ ಅಲ್ಲೇ ಇರುವ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಿಹಾರದ ಲಖಿಸರಾಯ್ ಜಿಲ್ಲೆಯ ಗುಂಜನ್ ಎಂಬ ಯುವತಿ ಕೂಡ ಇದ್ದಳು ಎನ್ನಲಾಗಿದೆ. ಈ ವೇಳೆ ಅಪಹರಣ ನಡೆಸಿದ ತಂಡ ಶಿಕ್ಷಕನನ್ನು ಯುವತಿಯ ಜೊತೆ ಮದುವೆ ಮಾಡಿಸಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮದುವೆ ನಡೆಸಿದ ಬಳಿಕ ಇಬ್ಬರನ್ನು ಅವನೀಶ್ ಮನೆಗೆ ಕರೆತಂದಿದ್ದಾರೆ. ಈ ವೇಳೆ ಅವನೀಶ್ ಯಾವುದೇ ವಿಷಯ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಯುವತಿ ಅವನೀಶ್ ಮನೆಗೆ ಹೋಗಿದ್ದಾಳೆ. ಆದರೆ ಅವನೀಶ್ ಮನೆಯವರು ಆಕೆಯನ್ನು ಮನೆಯ ಒಳಗೆ ಬಿಡದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ ಈ ಕುರಿತು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಇನ್ನು ಇತ್ತ ಶಿಕ್ಷಕ ಅವನೀಶ್ ಕೂಡ ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದು, ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ದೇವಸ್ಥಾನಕ್ಕೆ ಕರೆದೊಯ್ದು ಯುವತಿ ಜೊತೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ದೂರು ನೀಡಿದ್ದಾನೆ. ಎರಡೂ ಕಡೆಯ ದೂರನ್ನು ದಾಖಲಿಸಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು ಯಾರ ತಪ್ಪು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!