February 4, 2026

ಕನ್ಯಾನ: ಉದಯಾಸ್ತಮಾನ ಉರೂಸ್ ಮುಬಾರಕ್: ಯಶಸ್ವಿಗೊಳಿಸಲು ಜಮಾಅತ್ ಪ್ರವಾಸಿಗಳು ಕರೆ

0
image_editor_output_image-150301383-1734247935331

ಬಂಟ್ವಾಳ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರ ಸಾರಥ್ಯದಲ್ಲಿ 2025 ನೇ ಜನವರಿ 9 ರಿಂದ 19 ರ ವರೆಗೆ ನಡೆಯುವ ಕನ್ಯಾನ ಉದಯಾಸ್ತಮಾನ ಉರೂಸ್ ಮುಭಾರಕ್ ಯಶಸ್ವಿಗೊಳಿಸಲು ಕನ್ಯಾನ ಜಮಾಅತ್ ಪ್ರವಾಸಿಗಳು ಕರೆ ನೀಡಿದ್ದಾರೆ.

ಇತಿಹಾಸ ಪ್ರಸಿದ್ಧ ಕನ್ಯಾನ ರಹ್ಮಾನಿಯಾ ಜುಮಾ ಮಸ್ಜಿದಿನ ಪಶ್ಚಿಮ ಭಾಗದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಖ.ಸಿ ರವರ ಹೆಸರಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸುತ್ತಿರುವ ಉದಯಾಸ್ತಮಾನ ಉರೂಸ್ ಮುಭಾರಕ್ ನಲ್ಲಿ ಕೇರಳ ಕರ್ನಾಟಕದ ಸುಪ್ರಸಿದ್ದ ವಾಗ್ಮಿಗಳೂ ಸಾದಾತುಗಳು ಭಾಗವಹಿಸಲಿದ್ದಾರೆ.

10 ದಿವಸಗಳ ಧಾರ್ಮಿಕ ಮತ ಪ್ರವಚನ ಹಾಗೂ ಕೊನೆಯ ದಿನದ ಮೌಲಿದ್ ಮತ್ತು ಅನ್ನದಾನ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ಯಾನ ಜಮಾಅತ್ ಪ್ರವಾಸಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You may have missed

error: Content is protected !!