March 18, 2026

ಸೋಮೋಟೋ ಕೇಸ್: ರಮೇಶ್ ತೆಳ್ಳಾರು, ಶ್ರೀಕಾಂತ್‌ ಶೆಟ್ಟಿಗೆ ಜಾಮೀನು ಮಂಜೂರು

0
image_editor_output_image-2118653614-1734069679256.jpg

ಕಾರ್ಕಳ : ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹೇಳಿ ಪೊಲೀಸರಿಂದ ಸೋಮೋಟೋ ಕೇಸ್ ದಾಖಲಿಸಿಕೊಂಡಿದ್ದ ರಮೇಶ್ ತೆಳ್ಳಾರು ಹಾಗೂ ಸೋಮೋಟೋ ಕೇಸ್ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತಸ್ತರದ ಮುಖಂಡ ಶ್ರೀಕಾಂತ್‌ ಶೆಟ್ಟಿಗೆ ಡಿ. 10ರಂದು ಜಾಮೀನು ಮಂಜೂರಾಗಿದೆ.

ಶ್ರಿಕಾಂತ್ ಶೆಟ್ಟಿ ಹಾಗೂ ರಮೇಶ್ ತೆಳ್ಳಾರು ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸೋಮೋಟೋ ಕೇಸ್ ದಾಖಲಾಗಿತ್ತು. ಇದೀಗ 26 ದಿನಗಳ ಅನಂತರ ರಮೇಶ್ ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ರಮೇಶ್ ಪರವಾಗಿ ಮಣಿರಾಜ್ ಶೆಟ್ಟಿ ಮತ್ತು ಶ್ರೀಕಾಂತ್ ಶೆಟ್ಟಿ ಪರವಾಗಿ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!