ಮಂಗಳೂರು: ಲಾರಿ ಹರಿದು ಸ್ಕೂಟರ್ ಸವಾರ ಸಾವು: ಕಾವೂರು ಜಂಕ್ಷನ್ ಬಳಿ ಘಟನೆ
ಮಂಗಳೂರು: ಸ್ಕೂಟರ್ ಸವಾರನೊಬ್ಬನ ಮೇಲೆ ಲಾರಿ ಹರಿದು ಮೃತಪಟ್ಟಿರುವ ಘಟನೆ ಕಾವೂರು ಜಂಕ್ಷನ್ ಬಳಿ ಮಂಗಳವಾರ ನಡೆದಿದೆ. ಮೃತ ಸವಾರನನ್ನು ಪ್ರಕಾಶ್ ಅಂಚನ್ ಎಂದು ಗುರುತಿಸಲಾಗಿದೆ.
ಪ್ರಕಾಶ್ ಅಂಚನ್ ತಮ್ಮ ಸ್ಕೂಟರ್‌ನಲ್ಲಿ ಮರಕಡ ಕಡೆಯಿಂದ ಕಾವೂರು ಕಡೆಗೆ ಬರುತ್ತಿದ್ದರು. ಈ ವೇಳೆ ಸ್ಕೂಟರ್ ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಲಾರಿಯೊಂದು ಪ್ರಕಾಶ್ ಅವರ ಮೇಲೆ ಹರಿದಿದೆ. ಲಾರಿಯ ಚಕ್ರ ದೇಹದ ಮೇಲೆ ಹರಿದ ಕಾರಣ ಸವಾರ ಮೃತಪಟ್ಟಿದ್ದಾರೆ.
ಮಂಗಳೂರು ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




