ವಿಟ್ಲ: ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರವಿಪ್ರಕಾಶ್ ಅಧಿಕಾರ ಸ್ವೀಕಾರ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರವಿಪ್ರಕಾಶ್ ವಿಟ್ಲರವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ರವಿಪ್ರಕಾಶ್ ವಿಟ್ಲರವರು ಗ್ರಾಮ ಪಂಚಾಯತ್ ಸದಸ್ಯರಾಗಿ, ಪ್ರಸ್ತುತ ಎರಡನೇ ಬಾರಿ ಪಟ್ಟಣ ಪಂಚಾಯತ್ ಸದಸ್ಯರಾಗಿದ್ದಾರೆ. ಈ ಹಿಂದೆಯು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟು,, ಉಪಾಧ್ಯಕ್ಷರಾದ ಸಂಗೀತ ಪಣೆಮಜಲು, ಮುಖ್ಯಾಧಿಕಾರಿ ಕರುಣಾಕರ ವಿ., ಹಿರಿಯ ಬಿಜೆಪಿ ನಾಯಕರಾದ ನಿತ್ಯಾನಂದ ನಾಯಕ್ ಪುತ್ತೂರು ಗ್ರಾಮಾಂತ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್,ದ.ಕ.ಜಿಲ್ಲಾ ರಾಜ್ಯ ಚುನಾವಣಾ ಪ್ರಭಾರಿ ಸಾಜ ರಾಧಾಕೃಷ್ಣ ಆಳ್ವ, ವಿಟ್ಲ ಮಹಾಶಕ್ತಿಕೇಂದ್ರ ಅಧ್ಯಕ್ಷರು ಉದಯ ಕುಮಾರ್, ಪುತ್ತೂರು ಮಂಡಲ ಕಾರ್ಯದರ್ಶಿ ಶ್ರೀ ಕೃಷ್ಣ ವಿಟ್ಲ ವಿಟ್ಲ ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಹರೀಶ್ ಸಿ.ಎಚ್, ಜಗನ್ನಾಥ ಕಾಸರಗೋಡು, ರಾಮ್‌ದಾಸ್ ಶೆಣೈ, ಮೋಹನ್‌ದಾಸ್ ಉಕ್ಕುಡ, ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ಜಯಂತ, ಹರೀಶ್ ಸಿ.ಹೆಚ್, ಸುನಿತಾ ಪೂಜಾರಿ, ವಿಜಯಲಕ್ಷ್ಮಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
,,,,,,,,,




