ಮಂಗಳೂರು ವಿಮಾನ ನಿಲ್ದಾಣ: 48.75 ಲಕ್ಷ ರೂ.ಮೌಲ್ಯದ ಚಿನ್ನ, ಇ-ಸಿಗರೇಟ್ ವಶಕ್ಕೆ
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಡಿ1 ಮತ್ತು 2 ರಂದು ಅನುಮಾನದ ಮೇಲೆ ಇಬ್ಬರು ಪ್ರಯಾಣಿಕರನ್ನು ತಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಕಳ್ಳಸಾಗಣೆ ಚಟುವಟಿಕೆಗಳನ್ನು ಬಯಲು ಮಾಡಿದ್ದಾರೆ.
ಕೇರಳದ ಕಾಸರಗೋಡಿನ ನಿವಾಸಿಗಳಾದ ಪ್ರಯಾಣಿಕರು ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ಬಂದಿದ್ದರು.
ಪರಿಶೀಲನೆ ವೇಳೆ ಒಬ್ಬ ಪ್ರಯಾಣಿಕನ ದೇಹದಲ್ಲಿ ಬಚ್ಚಿಟ್ಟಿದ್ದ ಮೂರು ಅಂಡಾಕಾರದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು 625 ಗ್ರಾಂ ತೂಕದ 48.75 ಲಕ್ಷ ರೂ.ಮೌಲ್ಯದ 24 ಕ್ಯಾರೆಟ್ ಚಿನ್ನ, ಇ ಸಿಗರೇಟ್ ಪತ್ತೆಯಾಗಿದೆ.




