September 22, 2026

ಬಂಟ್ವಾಳ: ಹೆದ್ದಾರಿಯ ಡಿವೈಡರ್ ಮೇಲೆ ಹತ್ತಿ ರಸ್ತೆಗೆ ಪಲ್ಟಿಯಾದ ಪಿಕಪ್ ವಾಹನ

0
image_editor_output_image-497114554-1733636579903

ಬಂಟ್ವಾಳ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ‌ ಸರ್ಕಲ್ ಸಮೀಪದಲ್ಲಿ ಡಿವೈಡರ್ ಮೇಲೆ ಹತ್ತಿ ಪಿಕಪ್ ವಾಹನ ಪಲ್ಟಿಯಾದ ಘಟನೆ ಸಂಜೆ ವೇಳೆ ನಡೆದಿದೆ.

ಮಂಗಳೂರು ಕಡೆಯಿಂದ ಮೆಲ್ಕಾರ್ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನ ಬಿ.ಸಿ ರೋಡಿನ ಸರ್ಕಲ್ ನಿಂದ ಸ್ವಲ್ಪ ದೂರ ಸಾಗಿ ಚತುಷ್ಪತ ಕಾಂಕ್ರೀಟ್ ರಸ್ತೆಗೆ ಮಧ್ಯೆ ಹಾಕಲಾದ ಡಿವೈಡರ್ ಮೇಲೇರಿ ಅಲ್ಲೇ ಪಲ್ಟಿಯಾಗಿದೆ.

 

ಘಟನೆಯಲ್ಲಿ ಚಾಲಕ ಯಾವುದೇ ಗಾಯವಾಗದೆ ಅಪಾಯವಿಲ್ಲದೆ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ೨ ಎಸ್.ಐ.ಸಂಜೀವ, ಹೆಚ್.ಸಿ ದೇವರಾಜ್ ಬೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!