September 21, 2026

ಮೂಡುಬಿದಿರೆ: ಬೈಕಿನಿಂದ ಬಿದ್ದು ಮೃತ್ಯು

0
image_editor_output_image-653875875-1733565470420.jpg

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಅಕ್ಕಸಾಲಿಗರೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (49) ಅವರು ಮೃತಪಟ್ಟಿದ್ದು, ಪೋಲಿಸರು ಸಂಶಯಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡುಬಿದಿರೆ ಸಮೀಪ ಪಡುಮಾರ್ನಾಡು ಗ್ರಾಮದ ಬನ್ನಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಬೈಕ್‌ನಿಂದ ಬಿದ್ದು ಸೀತಾರಾಮರು ಸಾವನ್ನಪ್ಪಿದ್ದಾರೆ. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

 

ಮೂಡುಬಿದಿರೆಯ ಜ್ಯೋತಿನಗರದಲ್ಲಿ ಚಿನ್ನಾಭರಣ ತಯಾರಿಗೆ ಸಂಬಂಧಿಸಿದ ವಿಘ್ನೇಶ್‌ ಮೆಷಿನ್‌ ಕಟ್ಟಿಂಗ್‌ ಎಂಬ ಉದ್ಯಮವನ್ನು ಅವರು ನಡೆಸುತ್ತಿದ್ದರು.

ಜ. 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸು ಬರುತ್ತಿದ್ದ ವೇಳೆ ಬನ್ನಡ್ಕದ ಬಳಿ ಈ ದುರ್ಘಟನೆ ಸಂಭವಿಸಿದೆ. ಪೋಲಿಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!